ಕೋನ್ಯಾಕ್
ಪಶ್ಚಿಮ ಫ್ರಾನ್ಸಿನ ಷಾರಾಂಟ್ ಜಿಲ್ಲೆಯ ಒಂದು ಊರು. ಷಾರಾಂಟ್ ನದಿಯ ದಡದಲ್ಲಿದೆ. ದವಸಧಾನ್ಯ ಮತ್ತು ಜಾನುವಾರು ವ್ಯಾಪಾರ ಇಲ್ಲಿ ಸಾಕಷ್ಟಿದೆ. ಇಲ್ಲಿ ಬಿಳಿದ್ರಾಕ್ಷಿಯಿಂದ ಬಹು ಪ್ರಸಿದ್ಧವಾದ ಫ್ರೆಂಚ್ ಬ್ರಾಂದಿಯನ್ನು ತಯಾರಿಸಿ ರಫ್ತು ಮಾಡುತ್ತಾರೆ. ಈ ಬ್ರಾಂದಿ ಕೋನ್ಯಾಕ್ ಎಂದೇ ಪ್ರಸಿದ್ಧವಾಗಿದೆ. ಬ್ರಾಂದಿಯನ್ನು ತುಂಬಲು ಬೇಕಾಗುವ ಸೀಸೆಗಳನ್ನೂ ಮರದ ಪೀಪಾಯಿಗಳನ್ನೂ ಇಲ್ಲೇ ತಯಾರಿಸುತ್ತಾರೆ.   									 (ಬಿ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ